ಡಿಕೆಶಿ ಅವರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲಿ: ಡಿಕೆಶಿ ಪರ ಶಾಸಕ ಯತೀಂದ್ರ ಬ್ಯಾಟಿಂಗ್

0
90

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರೇ ಪಕ್ಷವನ್ನು ಮುನ್ನೆಡಸಲಿ. ಅವರೊಂದಿಗೆ ತಾವೆಲ್ಲಾ ಇರುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ತಿಳಿಸಿದ್ದಾರೆ.

ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಸುಮ್ಮನೇ ಕಿರುಕುಳ ನೀಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ನ ಹಿರಿಯ ನಾಯಕರು. ಅವರು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತಾರೆಂಬ ಭಯದಿಂದ ಬಿಜೆಪಿ ಅವರು ಡಿಕೆಶಿ ವಿರುದ್ಧ ಈ ರೀತಿ ಸುಳ್ಳು ಕೇಸ್ ಗಳನ್ನು ಹಾಕುತ್ತಿದ್ದಾರೆ. ಬಿಜೆಪಿ ಅವರು ಡಿಕೆಶಿ ಅವರೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾರೆ.

ಬಿಜೆಪಿ ವಿರುದ್ಧ ಡಿಕೆಶಿ ಅವರು ಮಾಡುವ ಕಾನೂನು ಹೋರಾಟ ಇರಬಹುದು ಅಥವಾ ರಾಜಕೀಯ ಹೋರಾಟ ಇರಬಹುದು ನಾವೆಲ್ಲ ಅವರ ಜೊತೆ ಇರುವುದಾಗಿ ಡಾ.ಯತೀಂದ್ರ ಅಭಯ ನೀಡಿದರು.

LEAVE A REPLY

Please enter your comment!
Please enter your name here