ಕೇರಳದಲ್ಲಿ ಕೊರೊನಾ ವೈರಸ್ ಪತ್ತೆ: ತೀವ್ರ ನಿಗಾದಲ್ಲಿ ವಿದ್ಯಾರ್ಥಿ!

0
68

ನ್ಯೂಸ್ ಕನ್ನಡ ವರದಿ: (30.01.2020): ಚಿನಾದಲ್ಲಿ ತಾಂಡವವಾಡುತ್ತಿರುವ ಕೊರೊನಾ ವೈರಸ್ ಸದ್ಯ ವಿಶ್ವದಾದ್ಯಂತ ಭೀತಿ ಹುಟ್ಟಿಸಿದೆ. ಚಿನಾದ ವುಹಾನ್ ನಗರವು ಈಗಲೂ ಸ್ತಬ್ಧವಾಗಿದ್ದು, ಅಧಿಕೃತ ಹೇಳಿಕೆಯ ಪ್ರಕಾರ ಸಾವಿನ ಸಂಖ್ಯೆ 170 ದಾಟಿದೆ. ಇದೀಗ ಭೀತಿ ಹುಟ್ಟಿಸುವ ಘಟನೆಯೊಂದು ಕೇರಳದಲ್ಲಿ ಕೇಳಿ ಬಂದಿದ್ದು, ವುಹಾನ್ ನಿಂದ ಕೇರಳಕ್ಕೆ ಬಂದಿದ್ದ ಕೇರಳ ನಿವಾಸಿ ವಿದ್ಯಾರ್ಥಿಯೋರ್ವನಿಗೆ ಈ ಸೋಂಕು ತಗುಲಿದ್ದು, ಕೊರೊನಾ ಪಾಸಿಟಿವ್ ಎಂದು ಪರೀಕ್ಷೆಗಳ ಮೂಲಕ ತಿಳಿದು ಬಂದಿದೆ.

ಚೀನಾದ ವುಹಾನ್ ಯುನಿವರ್ಸಿಟಿಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದ ಕೇರಳದ ವಿದ್ಯಾರ್ಥಿಯಲ್ಲಿ ಈ ಲಕ್ಷಣಗಳು ಕಂಡು ಬಂದಿದದ್ದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಕೊರೊನಾ ವೈರಸ್ ಇರುವುದು ದೃಢಪಟ್ಟಿದ್ದು, ತೀವ್ರ ನಿಗಾ ಘಟಕದಲಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಯ ದೇಹಾವಸ್ಥೆಯು ಉತ್ತಮವಾಗಿಯೇ ಇದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here