ಎಸ್ಡಿಪಿಐ ವಿರುದ್ಧ ಸುಳ್ಳುಕಥೆ ಹೆಣೆದ ಪೊಲೀಸ್ ಆಯುಕ್ತರ ವಿರುದ್ಧ ಮಾನನಷ್ಟ ಮೊಕದ್ದಮೆ: ಇಲ್ಯಾಸ್ ತುಂಬೆ

0
102

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಎಸ್‍ಡಿಪಿಐ ಕಾರ್ಯಕರ್ತರೆಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಈ ಬಗ್ಗೆ ಸೊಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ರಾಜ್ಯ ಸಮಿತಿಯಿಂದ ನೀಡುತ್ತಿರುವ ಸ್ಪಷ್ಟೀಕರಣ.

ಹಲ್ಲೆ ಘಟನೆಗೂ ಎಸ್‍ಡಿಪಿಐ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಆರೋಪಿಗಳು ಪಕ್ಷದ ಕಾರ್ಯಕರ್ತರಲ್ಲ. ಈ ರೀತಿಯ ಹಿಂಸಾ ಘಟನೆಗಳಲ್ಲಿ ಎಸ್‍ಡಿಪಿಐ ಪಕ್ಷಕ್ಕೆ ಯಾವುದೇ ನಂಬಿಕೆಯಿರುವುದಿಲ್ಲ. ಇಂತಹ ಹಿಂಸಾ ಪ್ರಕರಣಗಳನ್ನು ಪ್ರಾಮಾಣಿಕ ತನಿಖೆಗೆ ಒಳಪಡಿಸಿ ನೈಜ ಅಪರಾಧಿಗಳನ್ನು ಪತ್ತೆ ಮಾಡುವುದು ಪೊಲೀಸರ ಜವಾಬ್ದಾರಿಯಾಗಿದೆ. ಅಪರಾಧಿಗಳನ್ನು ಸೂಕ್ತ ಕಾನೂನು ಕ್ರಮಗಳಿಗೆ ಗುರಿಪಡಿಸುವುದು ನ್ಯಾಯಾಂಗದ ಹೊಣೆಯಾಗಿದೆ. ಇನ್ನು ಈ ಕುರಿತಾದಂತೆ ಸರಿಯಾದ ತನಿಖೆ ಕೂಡಾ ನಡೆಸದೇ ಎಸ್ಡಿಪಿಐ ವಿರುದ್ಧ ವೃಥಾ ಆರೋಪ ಮಾಡಿದ ಪೊಲೀಸ್ ಆಯುಕ್ತರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ಇದೀಗ ರಾಷ್ಟ್ರದಾದ್ಯಂದ ಸಿಎಎ, ಎನ್‍ಆರ್‍ಸಿ ಮತ್ತು ಎನ್‍ಪಿಆರ್ ಬಗ್ಗೆ ವ್ಯಾಪಾಕವಾದ ಜನಾಂದೋಲನ ಭುಗಿಲೆದ್ದಿರುವುದರಿಂದ ಜನರ ಮನಸ್ಸನ್ನು ದಿಕ್ಕು ತಪ್ಪಿಸುವ ಹಾಗೂ ಸಮಾಜದಲ್ಲಿ ತಪ್ಪು ಅಭಿಪ್ರಾಯಗಳನ್ನು ಮೂಡಿಸುವ ಸಲುವಾಗಿ ಇಂತಹ ಘಟನೆಗಳಿಗೆ ಎಸ್‍ಡಿಪಿಐ ಜೊತೆಗೆ ಸಂಬಂಧ ಕಲ್ಪಿಸುವುದನ್ನು ಎಸ್‍ಡಿಪಿಐ ಕಠಿಣ ಶಬ್ದಗಳಲ್ಲಿ ಖಂಡಿಸುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here