ಇತಿಹಾಸ ಪುನರ್‌ ರಚನೆಗೆ ಅಮಿತ್ ಶಾ.!

0
146

ನ್ಯೂಸ್ ಕನ್ನಡ ವರದಿ: ಭಾರತದ ದೃಷ್ಟಿಕೋನಕ್ಕೆ ಅನುಗುಣ ವಾಗಿ ಚರಿತ್ರೆ ಪುನಾರಚಿಸಬೇಕಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ವೀರ ಸಾವರ್ಕರ್‌ ಇಲ್ಲದೇ ಇರುತ್ತಿದ್ದರೆ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು ಕೇವಲ “ಬಂಡಾಯ’ ಎಂದು ಪರಿಗಣಿಸಲಾಗುತ್ತಿತ್ತು. ಅಂದಿನ ಕ್ರಾಂತಿಯನ್ನು “ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ’ ಎಂದು ಕರೆದಿದ್ದೇ ಸಾವರ್ಕರ್‌ ಎಂದಿದ್ದಾರೆ ಶಾ.

ಬನಾರಸ್‌ ಹಿಂದೂ ವಿವಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಕ್ಕಾಗಿನ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ವೀರ ಸಾವರ್ಕರ್‌ಗೆ ಭಾರತ ರತ್ನ ನೀಡಬೇಕು ಎಂಬ ಪ್ರಸ್ತಾಪಕ್ಕೆ ವಿಪಕ್ಷಗಳ ವತಿಯಿಂದ ಪ್ರಬಲ ಆಕ್ಷೇಪ ವ್ಯಕ್ತವಾಗಿರು ವಂತೆಯೇ ಈ ಹೇಳಿಕೆ ನೀಡಿದ್ದಾರೆ. ಸಾವರ್ಕರ್‌ ಇಲ್ಲದಿರುತ್ತ ದ್ದರೆ ನಾವು ಈಗಲೂ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾ ಮವನ್ನು ಬ್ರಿಟಿಷ್‌ ದೃಷ್ಟಿಕೋನದಿಂದಲೇ ನೋಡುತ್ತಿರುತ್ತಿದ್ದೆವು ಎಂದಿದ್ದಾರೆ.

ಇತಿಹಾಸಕಾರರು ಸ್ಕಂದಗುಪ್ತ, ಚಂದ್ರಗುಪ್ತರಂಥ ಪ್ರಖ್ಯಾತ ಆಡಳಿತಗಾರರ ಬಗ್ಗೆ ಹೆಚ್ಚಿನ ರೀತಿಯಲ್ಲಿ ಬರೆಯಬೇಕು ಎಂದು ಅಮಿತ್‌ ಶಾ ಸಲಹೆ ನೀಡಿದ್ದಾರೆ.

LEAVE A REPLY

Please enter your comment!
Please enter your name here