ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ!

0
31

ನ್ಯೂಸ್ ಕನ್ನಡ ವರದಿ: (25.01.2020): ತಾನು ಬಡತನದಲ್ಲಿದ್ದು, ಮಂಗಳೂರಿನಲ್ಲಿ ಬುಟ್ಟಿಯಲ್ಲಿ ಕಿತ್ತಳೆಯನ್ನಿಟ್ಟುಕೊಂಡು ಮಾರಿ ಅದರಿಂದ ಉಳಿತಾಯವಾದ ಹಣದಿಂದ ತಮ್ಮ ಊರಿನಲ್ಲಿ ಶಾಲೆಯನ್ನು ಕಟ್ಟಿಸಿದ್ದ ಹರೇಕಳ ಹಾಜಬ್ಬರವರಿಗೆ ಈ ಹಿಂದೆ ಹಲವಾರು ಪ್ರಶಸ್ತಿಗಳು ಸಂದಿತ್ತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಅವರು ಭಾಜನರಾಗಿದ್ದರು. ಇದೀಗ ಭಾರತದ ಉನ್ನತ ಪ್ರಶಸ್ತಿಯಾಗಿರುವ ಪದ್ಮಶ್ರೀ ಪುರಸ್ಕಾರವು ಅರ್ಹವಾಗಿಯೇ ಹರೇಕಳ ಹಾಜಬ್ಬರವರಿಗೆ ಸಂದಿದೆ.

71 ಗಣರಾಜ್ಯೋತ್ಸವ ನಾಳೆ ನಡೆಯಲಿದ್ದು, ಇದಕ್ಕೆ ಮುಂದಿನ ದಿನವಾದ ಇಂದು ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಉತ್ತರ ಕರ್ನಾಟಕದ ತುಳಸಿ ಗೌಡರವರಿಗೂ ಕೂಡಾ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಒಟ್ಟು ಈ ಬಾರಿ 21 ಮಂದಿಗೆ ಪದ್ಮಶ್ರೀ ನೀಡಲಾಗಿದೆ.

 • ಜಗದೀಶ್ ಲಾಲ್ ಅಹುಜಾ – ಸಮಾಜಸೇವೆ (ಸೇವೆ) – ಪಂಜಾಬ್
 • ಮೊಹಮ್ಮದ್ ಶರೀಫ್ – ಸಮಾಜಸೇವೆ (ಸೇವೆ) – ಉತ್ತರ ಪ್ರದೇಶ
 • ಜಾವೇದ್ ಅಹ್ಮದ್ ತಕ್ – ಸಮಾಜಸೇವೆ (ಅಂಗವಿಕಲರ ಕಲ್ಯಾಣ) – ಜಮ್ಮು–ಕಾಶ್ಮೀರ
 • ಸತ್ಯನಾರಾಯಣ್ ಮುಂದಯೂರ್ – ಸಮಾಜಸೇವೆ (ಶಿಕ್ಷಣ) – ಅರುಣಾಚಲ ಪ್ರದೇಶ
 • ಅಬ್ದುಲ್ ಜಬ್ಬಾರ್ – ಸಮಾಜಸೇವೆ (ಸೇವೆ) – ಮಧ್ಯ ಪ್ರದೇಶ
 • ಉಶಾ ಚುಮಾರ್ – ಸಮಾಜಸೇವೆ (ನೈರ್ಮಲ್ಯ) – ರಾಜಸ್ತಾನ
 • ಪೋಪಟ್‌ರಾವ್ ಪವಾರ್ – ಸಮಾಜಸೇವೆ (ನೀರಾವರಿ) – ಮಹಾರಾಷ್ಟ್ರ
 • ಅರುಣೋದಯ್ ಮೊಂಡಲ್ – ಆರೋಗ್ಯ – ಪಶ್ಚಿಮ ಬಂಗಾಳ
 • ರಾಧಾಮೋಹನ್ ಮತ್ತು ಸಬರ್‌ಮತಿ – ಸಾವಯವ ಕೃಷಿ – ಒಡಿಶಾ
 • ಕುಶಾಲ್ ಕೊನ್‌ವಾರ್ ಶರ್ಮಾ – ಪಶುವೈದ್ಯಕೀಯ – ಅಸ್ಸಾಂ
 • ಟ್ರಿನಿಟಿ ಸೈಯೂ – ಸಾವಯವ ಕೃಷಿ – ಮೇಘಾಲಯ
 • ರವಿ ಕಣ್ಣನ್ – ವೈದ್ಯಕೀಯ (ಗ್ರಂಥಿಶಾಸ್ತ್ರ) – ಅಸ್ಸಾಂ
 • ಎಸ್. ರಾಮಕೃಷ್ಣನ್ – ಸಮಾಜಸೇವೆ (ಅಂಗವಿಕಲರ ಕಲ್ಯಾಣ) – ತಮಿಳುನಾಡು
 • ಸುಂದರಂ ವರ್ಮಾ – ಸಮಾಜಸೇವೆ (ಪರಿಸರ ಮತ್ತು ಅರಣ್ಯೀಕರಣ) – ರಾಜಸ್ತಾನ
 • ಮುನ್ನಾ ಮಾಸ್ಟರ್ – ಕಲೆ (ಭಜನ್) – ರಾಜಸ್ತಾನ
 • ಯೋಗಿ ಏರಾನ್ – ವೈದ್ಯಕೀಯ – ಉತ್ತರಾಖಂಡ
 • ರಹೀಬಾಯಿ ಸೋಮಾ ಪೋಪರೆ – ಸಾವಯವ ಕೃಷಿ – ಮಹಾರಾಷ್ಟ್ರ
 • ಹಿಮ್ಮತ್ ರಾಮ್ ಭಾಂಭೂ – ಸಮಾಜಸೇವೆ (ಪರಿಸರ) – ರಾಜಸ್ತಾನ
 • ಮೂಜಿಕ್ಕಲ್ ಪಂಕಜಾಕ್ಞಿ – ಕಲೆ – ಕೇರಳ

LEAVE A REPLY

Please enter your comment!
Please enter your name here